Wednesday, September 28, 2011

ಕಾಣತಾವ ನೆನಪು
ಹೇಗೆ ಮರೆಯಲಿ ವಿಠಲ: ಎಲ್ಲರಿಗೂ ಅವರದೇಯಾದ ನೆನಪುಗಳು ಕಾಡ್ತಾ ಇರ್ತವೆ. ಹಾಗೇ ನನ್ನಲೂ ಅಂತ ಕೆಲ ನೆನಪುಗಳಿವೆ. ಅವುಗಳೊಮ್ಮೆ ಮನದಲಲ್ಲಿ ಬಂದ್ರೆ ಸಾಕು, ಅಷ್ಟು ಬೇಗನೇ ನನಿಂದ ಮಾಸುವಂತವಲ್ಲ. ಬೇಂಬಿಡದೇ ಕಾಡ್ತವೆ. ಆಗ ನಾ ತೊಡಗಿರುವ ಕೆಲಸದಿಂದ ಸ್ವಲ್ಪ ದೂರ ಸರಿದು ಕಣ್ಮುಚ್ಚಿ ಕೂತು ಬಿಡ್ತೆನೆ, ಅವುಗಳು ನನ್ನ ಕಣ್ಮುಂದೆ ಬಂದು ಬಿಡ್ತವೆ. ಹಾಗೇ ಮೊನ್ನೆ ನನಗೆ ಕಾಡಿದ ನೆನಪು ಅಂದ್ರೆ ವಿಠಲ್
ಇದು ನಾನು ಕನರ್ಾಟಕ ವಿಶ್ವವಿದ್ಯಾಲ್ಯದಲ್ಲಿ ಎಂಎ ಓದುತ್ತಾಗಿದ್ದಾಗಿನ ನೆನಪು, ನಾನು ಓದುತ್ತಿದ್ದದ್ದು ಪತ್ರಿಕೋದ್ಯಮ ಹೀಗಾಗಿ ಆಗ ನನಗೆ ಪತ್ರಿಕೆಗಳಿಗೆ ಬರೆಯುವ ಹುಚ್ಚು. ಅದೊಂದು ದಿನ ಶ್ರೀನಗರದಿಂದ ನಡೆದುಕೊಂಡು ಕಾಲೇಜಿಗೆ ಹೊಗ್ತಾ ಇದ್ದೆ. ಆಗ ದಾರಿ ಮಧ್ಯ ಬೇಟಿ ಯಾಗಿದ್ದು ವಿಠಲ. ಅದೇ ಮೊದಲ ಬಾರಿ ನಾ ಅವನನ್ನ ಕಂಡದ್ದು. ಹಾಗೇ ಅವನನ್ನೇ ನೋಡುತ್ತಲೇ ನಿಂತೆ. ಏಕೆಂದರೆ ಅವನೊಬ್ಬ ಅಂದ ಯುವಕ, ಆದ್ರೂ ಯಾರ ಸಹಾಯವಿಲ್ಲದೆ ನಿಭರ್ೀಡೆಯಿಂದ ನಿಧಾನವಾಗಿ ಹೆಜ್ಜೆ ಹಾಕುತ್ತಲೇ ನಡೆಯುತ್ತಿದ್ದ. ಕುತೂಹಲ ತಾಳಲಾದರೆ ಕೇಳಿದೆ. ಅದಕ್ಕವನಂದ ತುಂಬಾ ಸಿಂಪಲ್. ಪ್ರತಿ ದಿನ ನಾ ಇದೇ ದಾರಿಯಲ್ಲಿ ನಡೆಯುತ್ತೇನಲ್ಲ, ಹೀಗಾಗಿ ನನಗೆ ಈ ರಸ್ತೆ ತುಂಬಾ ಪರಿಚಯವಾಗಿದೆ ಅಂದ. ಸರಿ ಇವತ್ತು ನಾ ನಿನಗೆ ಸಹಾಯ ಮಡ್ಲಾ ಅಂತ ಕೇಳಿದ್ರೆ ಪರವಾಗಿಲ್ಲ ನಾ ಒಬ್ಬನೇ ಹೋಗ್ತೆನೆ. ದಯವಿಟ್ಟು ತಪ್ಪು ತಿಳಿಯಬೇಡಿ, 'ಇವತ್ತು ನೀವಿದಿರಾ ನಾಳೆ ಯ್ಯಾರಿರ್ತಾರೆ ನನಗೆ' ಹೀಗಾಗಿ ನಾನೇ ಹೋಗ್ತೆನೆ ಅಂದ. ಸರೀ ಅಂತ ನಾ ಮುಂದೇನೂ ನಡೆದೆ ಆದ್ರೆ ಅವನ ಆ ಮಾತು ಮಾತ್ರ ಮರೆಯಲ್ಲಿಲ್ಲ. ನೋಡಿ ಜೀವನಕ್ಕೆ ಮುಖ್ಯವಾದದ್ದೇ ಕಣ್ಣುಗಳು ಅವಿಲ್ಲದೇ ಕತ್ತಲ ಪ್ರಪಂಚದಲ್ಲಿ ತನ್ನ ಬದುಕನ್ನು ದೂಡತ್ತಿರುವ ಆ ವಿಠಲ ಯ್ಯಾರೋಬ್ಬರ ಸಹಾಯ ಬಯಸದೇ ಜೀವನ ಮಾಡುತ್ತಿದ್ದಾನೆ. ಇಷ್ಟಕ್ಕೆ ಸುಮ್ಮನಿದ ನಾನು ಮರುದಿನ ಅವನ ಪರಿಚಯ ಮಾಡ್ಕೊಂಡೆ, ವಿಠಲ ಇತಿಹಾಸ ವಿಭಾಗದಲ್ಲಿ ಎಂಎ ಒದ್ತಾ ಇದ್ದ. ಧಾರವಾದಕ್ಕೆ ಹತ್ತಿರವಾದ ಸವದತ್ತಿ ಅವನ ಊರಾಗಿತ್ತು. ಅಪ್ಪ ಇಲ್ಲ ಅಮ್ಮ ಇದಾಳೆ. ಮನೆಯಲ್ಲಿ ಬಡತನ, ಇವನು ಮುಂದೆ ಐಎಎಸ್ ಮಾಡುವ ಕನಸ್ಸನ್ನೂ ಬೇರೆ ಇಟ್ಟುಕೊಂಡಿದ್ದ. ಆದ್ರೆ ಆ ಕನಸ್ಸನ್ನ ನನಸು ಮಾಡುವ ಶಕ್ತಿ ಇವನ ತಾಯಿಗೆ ಇರಲಿಲ್ಲ. ಇದಿಷ್ಟು ಇವನ ಜೀವನದ ವ್ಯಥೆ, ಆದ್ರೂ ಅವನ ಆಸೆ ಮಾತ್ರ ಕುಗ್ಗಿರಲಿಲ್ಲ. ಇದ್ದ ಬಡತನವನ್ನೇ ಮೆಟ್ಟಿ ನಿಲ್ಲುವ ದೃಢ ಮನಸ್ಸು ಅವನದಾಗಿತ್ತು. ಅವನ ಆ ಜೀವನ ಕಥೆ, ಅವನ ಆಸೆಗಳನ್ನೇಲ್ಲ ಕೇಳಿದ ನಾನು ಅದನ್ನ ಅಕ್ಷರ ರೂಪದಲ್ಲಿ ತಂದು ಒಂದು ಪ್ರಮುಖ ದಿನ ಪತ್ರಿಕೆಗೆ ಲೇಖನವಾಗಿ ಕಳುಹಿಸಿದೆ. ಒಂದು ವಾರದಲ್ಲಿ ಆ ಲೇಖನನೂ ಪ್ರಕಟವಾಯ್ತು. ಅದರಿಂದ ನನಗೆ ಖುಷಿಯಾಯ್ತು ಆದ್ರೆ ಆ ಖುಷಿ ಹಂಚಿಕೊಳ್ಳೊಣವೆಂದರೆ ಆ ವಿಠಲ ಸಿಕ್ಕಿರಲಿಲ್ಲ. ಕ್ಲಾಸಿಗೂ ಬಂದಿರಲ್ಲಿಲ್ಲ. ಮತ್ತೆ ನನ್ನ ಅವನ ಬೇಟಿಯಾಗಿದ್ದು ಬರೋಬ್ಬರಿ 15 ದಿನದ ನಂತದ. ಅದೇ ರಸ್ತೆಯಲ್ಲಿ. ಅವನನ್ನ ಕಂಡು ನಾನು. ಖುಷಿಯಿಂದ ವಿಠಲ್ ನಿನ್ನ ಲೇಖನ ಅನ್ನುವಷ್ಟರಲ್ಲಿ ನನ್ನ ಧ್ವನಿ ಕೇಳಿದ ವಿಠಲ ತುಂಬಾ ಭಾವುಕನಾದ, ಅವನು ಹೇಳುತ್ತಿರುವ ಕೃತಜ್ಞತೆ ಕಂಡು ನನ್ನ ಕಣ್ಣು ಒದ್ದೇಯಾಗಿದ್ದವು. ಸರ್ ನನಗೆ ನನ್ನ ಸಹಪಾಟಿಯೊಬ್ಬ ಓದಿ ಹೇಳಿದ, ಅದು ಪತ್ರಿಕೆಯಲ್ಲಿ ಪ್ರಕಟವಾದ ಮರು ದಿನವೇ ನಮ್ಮ ವಿಭಾಗಕ್ಕೆ ಒಬ್ಬ ನಿವೃತ್ತ ಅಧೀಕಾರಿ ನನ್ನನ್ನ ಹುಡಿಕಿಕೊಂಡು ಬಂದಿದ್ದರಂತೆ, ನನಗೆ ಹುಶಾರಿಲ್ಲದ ಕಾರಣ ನಾನು ವಿಭಾಗಕ್ಕೆ ಹೋಗಿದ್ದಿಲ್ಲ. ಆದ್ರೆ ಅವರು ನನ್ನ ಸಹಪಾಟಿಯೊಬ್ಬನೊಂದಿಗೆ ನಮ್ಮ ಮನೆಗೆ ಬಂದಿದ್ದರು. ಅವರು ನಿವೃತ್ತ ಸಕರ್ಾರಿ ಅಧಿಕಾರಿ, 'ಸರ್ ಅವರು ಹೇಳಿದ್ರು' ನಿನ್ನ ಲೇಖನ ಓದಿದೆ. ನೀನು ಎಷ್ಟು ಬೇಕಾದ್ರು ಓದು, ಖಚರ್ಿನ ಬಗ್ಗೆ ಚಿಂತಿಸಬೇಡ ಬರುವ ಖರ್ಚನ್ನು ನಾ ನೋಡಿಕೊಳ್ಳುತ್ತೆನೆ ಅಂತ, ಸಾರ್ ಅಷ್ಟೇ ಅಲ್ಲ ಆವಾಗಾವಾಗ ಬಂದು ನಿನ್ನ ಮಾತಾಡಿಕೊಂಡು ಹೋಗ್ತೆನೆ ಅಂದ್ರು ಸಾರ್, ಸಾರ್, ನಿಮ್ಮಿಂದ ನನಗೆ ತುಂಬಾ ಉಪಕಾರವಾಯ್ತು ನಿಮಗೆ ಧನ್ಯವಾದಗಳು ಅಂತ ಹೇಳಿದ್ದ ಆ ವಿಠಲ. ಈ ಘಟನೆ ಜರುಗೀ ಎರಡು ವರ್ಷವಾಗುತ್ತ ಬಂತು. ನಾನೀಗ್ ಇರುವುದು ರಾಜಧಾನಿ ಬೆಂಗಳೂರಿನಬಲ್ಲಿ. ಕೆಲಸ ಸಮಯ ಸುದ್ದಿ ವಾಹಿನಿಯಲ್ಲಿ. ಆ ನೆನಪು ಮಾತ್ರ ನನಗೆ ಮತ್ತೆ ಮತ್ತೆ ಕಾಡ್ತಾನೆ ಇರುತ್ತೆ. ಈಗ ಆ ವಿಠಲ ಎಲಿದ್ದಾನೆ ಹೇಗಿದ್ದಾನೆ ಗೊತ್ತಿಲ್ಲ. . . . ವಿಠಲ ನೀ ಏಲ್ಲೇ ಇರು ಒಟ್ಟಿನಲ್ಲಿ ಚನ್ನಾಗಿರು. ಇದು ಈಗಿನ ನೆನಪು ಇನ್ನೂಂದು ಕಾಣುವ ನೆನಪಿನೊಂದಿಗಿ ಮತ್ತೆ ಬರ್ತೆನೆ. ನಮಸ್ಕಾರ.

2 comments:

Aatish said...

ವಿಠಲನ ಜೀವನ ಅಷ್ಟೇ ಅಲ್ಲ ನಿಮ್ಮ ಲೇಖನಿ ಇನ್ನೂ ಅನೇಕ ಸಾಮಾಜಿಕ ಕ್ರಾಂತಿ ಮೂಡಿಸಲಿ ಎನ್ನುವುದೇ ನನ್ನ ಹೆಬ್ಬಯಕೆ..

Malatesh Kakade said...

Keep Up The Good Work Chida!!!!! I am really proud of you!!!!