Thursday, April 1, 2010

ನಾನೂ ಕೂಡಾ ಸೇಮ್ ಟು ಯು ಅಂತ ಹೇಳಿದ್ದೆ

ನನ್ನ ಕಲರವ ಓದುಗರಿಗೆ ಮತ್ತೊಂಮ್ಮೆ ಆತ್ಮೀಯ ಸ್ವಾಗತ, ಇಂದಿಗೆ ಅಂದರೆ 2 ಏಪ್ರೀಲ್ 2010ಕ್ಕೆ ಕಲರವ ನಾದ ಒಂದು ವರ್ಷವನ್ನು ಪೂರೈಸಿ ಏಳು ಬೀಳುಗಳನ್ನು ಸಹಿಸಿಕೊಂಡು ಎರಡನೇ ವರ್ಷಕ್ಕೆ ಕಾಲಿಟ್ಟಿದೆ. ಸಂದರ್ಭದಲ್ಲಿ ಕಲರವ ನಾದವನ್ನು ಮನಬಿಚ್ಚಿ ಓದಿದವರಿಗೆ, ಪುಟ ತೆರೆದು ಓದುವ ಮನಸ್ಸಿಲ್ಲ/ಸಮಯವಿಲ್ಲ, ಹಾಗೂ ಓದುವ ಮನಸ್ಸಿನಿಂದ ಕಲರವವನ್ನು ಕಷ್ಟಪಟ್ಟು ತೆರೆದು ಅದನ್ನು ಮತ್ತೇ ಎರಡು ಭಾರಿ ಕ್ಲಿಕ್ ಮಾಡಲು ತಿಳಿಯದೇ ಓದುವ ಆಸೆ ನಿರಾಸೆಗೊಂಡವರಿಗೆ ಹೀಗೆ ಎಲ್ಲರಿಗೂ ನನ್ನ ಕಲರವ ಪರವಾಗಿ ಏಪ್ರೀಲ್ ಪೂಲ್ ಹೀ ಹೀ ಹೀ. . . . . ! ಇಂದಿನಿಂದ ಕಲರವದ ಪುಟ ವಿನ್ಯಾಸವನ್ನು ಬದಲಿಸಿದ್ದೇನೆ. ಅಂದರೆ ಮೊದಲಿನಂತೆ ಕಲರವ ಪತ್ರಿಕೆಯನ್ನು ನೀಟಾಗಿ ಪುಟವಿನ್ಯಾಸ ಮಾಡಿ ಹಾಕುವದಿಲ್ಲ ಏಕೆಂದರೆ ಹೀಗೆ ಹಾಕುವದರಿಂದ ಕೇಲವು ಓದುಗರಿಗೆ ತುಂಬಾ ತೊಂದರೆಯಾಗುತ್ತದೆ ಅಂಥೆ ಪುಟವನ್ನು ತೆರೆಯಲು ಬರುವದಿಲ್ಲವಂತೆ ಹಾಗಾಗಿ ಇನ್ನು ಮುಂದೆ ಯಾವುದೇ ರೀತಿಯ ಪುಟವಿನ್ಯಾಸವಿಲ್ಲದೆ. ನನ್ನ ಕಲರವ ನಾದವನ್ನು ಸರಳವಾಗಿ ಬಿಚ್ಚಿಡುತ್ತೇನೆ. ಇಂದು ನನ್ನ ಜನ್ಮದಿನ, ಹೀಗಾಗಿ ನಾಲ್ಕು ವರ್ಷದ ಹಿಂದೆ ಇದೇ ದಿನದಂದು ನಡೆದ ಒಂದು ಸತ್ಯ ಹಾಸ್ಯವನ್ನು ನಿಮ್ಮ ಮುಂದೆ ಇಟ್ಟಿದ್ದೇನೆ. ತಾವು ತಪ್ಪದೇ ಇದನ್ನು ಓದಿ. . . . . ನಿಮ್ಮ ಮರು ಅನಿಸಿಕೆಗಾಗಿ ಕಾಯುತ್ತಿರುವ ನಿಮ್ಮಯ ಚೀದು. ನಾನೂ ಕೂಡಾ ಸೇಮ್ ಟು ಯು ಅಂತ ಹೇಳಿದ್ದೆ ನನಗೆ ಬೇಜಾರಾದಾಗೊಮ್ಮೆ ರಾತ್ರಿ ವಸತಿಗೆಂದು ಆತ್ಮೀಯ ಸ್ನೇಹಿತ ಕಿರಣ ರೂಮಿಗೆ ಹೊಗುವದು ನನ್ನ ವಾಡಿಕೆ. ಅಂದರೆ ವಾರದಲ್ಲಿ 1-2 ದಿನ ಹೋಗುತ್ತಿದ್ದೆ. ಅಣ್ಣನಿಗೆ ನೋಟ್ಸ್ಟ ನೆಪ ಹೇಳಿ, ಓದಲು ಎಂದು ಬುರುಡೆ ಬಿಟ್ಟು ಹೊಗುತ್ತಿದ್ದೆ, ಹರಟೆ ಹೊಡೆಯಲು ಹೋಗುತ್ತೇನೆಂಬುದು ಅವನಿಗು ತಿಳಿದ ವಿಚಾರವೇಯಾಗಿತ್ತು. ನನ್ನ ಮತ್ತು ಕಿರಣನದು ವಿಚಿತ್ರ ಸ್ವಭಾವದ ಬುದ್ದಿ, ನಮಗೆ ಬೇಜಾರು ಕಳೆಯುವದೇಂದರೆ, ನೋಡಿದ ಸಿನಿಮಾವನ್ನೇ ಮತ್ತೇ ಮತ್ತೇ ನೋಡುವದು. ಅದು ಹೇಗಿರಬೇಕೆಂದರೆ ವಿಚಿತ್ರ ಪ್ರೇಮಕಥೆಯಾದಾರಿತ ಚಿತ್ರವಾಗಿರಬೇಕು. ಉದಾ: ಹಿಂದಿಯ ಹಮ್ ದಿಲ್ ದೇ ಚುಕೆ ಸನಂ, ತೆಲುಗಿನ ಘರ್ಷಣಂ, ಕನ್ನಡದ ನಿನಗಾಗಿ. ಇಂತಹ ವಿಚಿತ್ರ ಚಿತ್ರಗಳು. ಇವುಗಳನ್ನು ನೋಡಿ ಬೇಜಾರಾದಾಗ ಮತ್ತೇ ಇಂತಾ ಅಭಿರುಚಿ ಚಿತ್ರಗಳ ಹುಡುಕಾಟಕ್ಕೆ ನಿಂತರೆ, ಒಂದು ರಾತ್ರಿಯಲ್ಲಿ ಮೂರು ಸಿನಿಮಾ ನೋಡಿ ಮುಗಿಸುವದು ಇಷ್ಟ್ಟವಾದರೆ ಅವುಗಳು ನಮ್ಮ ಗಣಕಯಂತ್ರದಲ್ಲಿ ನಕಲು ಮಾಡಿಕೊಂಡು ಅದು ಬೇಜಾರಾಗುವವರೆಗು ಯಾವ ಸಿನಿಮಾ ಸುದ್ದಿಗೂ ಹೊಗುತಿದ್ದಿಲ್ಲ. ಅದನ್ನೇ ನೋಡುವುದು. ಹಿಗೇ, ಒಂದು ದಿನ ಬೇಜಾರಾಯಿತೇಂದು ರಾತ್ರಿ ಊಟ ಮುಗಿಸಿಕೊಂಡು ಮತ್ತೇ ಅಣ್ಣನಿಗೆ ಅದೇ ಹಳಸು ನೇಪ ಹೇಳಿ ಹೊರಟು ನಿಂತೆ, ಆದರೆ ಅಂದು ಮಾತ್ರ ಸ್ನೇಹಿತ ಕಿರಣ ಭಿನ್ನ ವ್ಯಕ್ತಿತ್ವ ಹೊಂದಿದ್ದ. ನಾನು ಕಾಗೆ ಕಪ್ಪಗಿರುತ್ತೆ ಎಂದರೆ, ಇಲ್ಲಾ ಬೆಳ್ಳಗಿರುತ್ತೆ, ನೀ ಬರೀ ಕಪ್ಪು ಕಾಗೆ ಮತ್ರಾ ನೋಡಿದ್ದಿಯಾ, ಅದಕ್ಕೆ ನೀ ಹಿಂದಿರುವುದು ಎಂದು ಹೇಳುತ್ತಿದ್ದನಲ್ಲದೇ ನಾ ಸರಿ ಅಂತ ಹೇಳುವವರೆಗೆ ಬಿಡುತ್ತಿರಲ್ಲಿಲ್ಲ. ಇದರರ್ಥ ಯಾವುದೇ ವಿಷಯಕ್ಕೂ ನಂದೇ ಸರಿಯಂದು ವಾದಿಸುವ ಗುಣ ಅವನದಾಗಿತ್ತು. ನಾ ತಪ್ಪೆಂದು ಹೇಳಿದರೆ ವಾದಕ್ಕೆ ನಿಲುತ್ತಿದ್ದ. ಆದರೆ ಅಂದು ಮಾತ್ರ ಯಾವ ವಾದವನ್ನು ಮಾಡಲಿಲ್ಲ. ನಾ ಹೇಳಿದ್ದಕ್ಕೆಲ್ಲ ಹೌದೆಂದು ಹೇಳಿ ಮುಗುಳ್ನಕ್ಕು ಸುಮ್ಮನಾಗುತ್ತಿದ್ದ. ನನಗಾಶ್ಚರ್ಯ ಇಂದು ಇವನ್ಯಾಕೇ ಹೀಗಿದಾನೇ, ಏನಾಗಿದೇ ಇವನಿಗೆ ಸಂಶಯದಿಂದ ಕೇಳಿದೆ, 'ಯಾಕೋ ತಮ್ಮಾ ಇವತ್ತೇನಾಗೇತಿ ನಿನಗೆ, ನಾ ಏನ್ ಹೇಳಿದ್ರು ಸುಮ್ಕ ಅದಿಯಾ' ಅಂದೆ ಅದಕ್ಕವನು ನಾ ಯಾಕೇ ನುಮ್ಕಿದೇನಿ ಅಂತ ಇನ್ನೂ 2 ತಾಸು ಬಿಟ್ಟು ಹೇಳುತ್ತೇನೆಂದು ಕೈಯಲ್ಲಿದ್ದ ವಾಚ್ ನೋಡಿ ಹೇಳಿ ಮತ್ತೆ ನಕ್ಕು ಸುಮ್ಮನಾದ. ಅಂದಿನ ಅವನ ವಿಚಿತ್ರ ನಡುವಳಿಕೆ ಅರ್ಥವಾಗದ ನಾನು ಸರಿ ನಾ ಮಲಗುತ್ತೇನೆಂದು ಹೇಳಿದಾಗ ಸಮಯ ಸರಿಯಾಗಿ 11:15 ಆಗಿತ್ತು. ಬೇಡಾ ಮಲಗುವಂತೆ ಇನ್ನು 45 ನಿಮಿಷ ಸುಮ್ಮನೆ ಕುಡು ಎಂದ. ಅದೇಲ್ಲ ಸಾದ್ಯಯವಾಗದ ಮಾತು ಎಂದು ಮಲಗುತ್ತೇನೆಂದರೂ ಬಿಡಲಿಲ್ಲ. ಒಟ್ಟಿನಲ್ಲಿ ಹಾಗೂ ಹೀಗೂ ಸರಿಯಾಗಿ 12 ಗಂಟೆಯಾದಾಗ ನನ್ನೆದುರಿಗೆ ಬಂದು ನಿಂತ ಅವನು ಹೇ ಚಿದು ವಿಶ್ ಯು ಹ್ಯಾಪಿ ಬತರ್್ ಡೇ ಅಂದ. ಆಕ್ಷಣದಲ್ಲಿ ಏನು ಅರಿಯದಾದ ನಾನು ಸಂತೋಷ ಉಕ್ಕಿಹರಿದು 'ಸೇಮ್ ಟು ಯು ಅಂದೆ' ಅವನು ಹುಚ್ಚಾ ಇವತ್ತು ಜನ್ಮದಿನ ನಿನ್ನದು ಮಾತ್ರ ನನ್ನದಲ್ಲ ಎಂದ ಹೋ ಸ್ವಾರಿ ಕಣೋ ಆವೇಶದಿಂದ ಹಾಗೇ ಹೇಳಿದೆ ಎಂದೆ. ನಿವೇ ಹೇಳಿ ನಾ ಹಾಗೆ ಹೇಳಿದ್ದು ತಪ್ಪಾ.

2 comments:

ಸಂಜಯ. ಚಿಕ್ಕಮಠ said...

Good keep it continue

Unknown said...

Hauda Baravanigey bramhane......